ads

Ads

Sri Guru charitra in kannada - ಶ್ರೀ ಗುರು ಚರಿತ್ರೆ ಸರಳ ಕನ್ನಡದಲ್ಲಿ.

Sri Guru charitra in kannada - ಶ್ರೀ ಗುರು ಚರಿತ್ರೆ ಸರಳ ಕನ್ನಡದಲ್ಲಿ.


ಲಿಂಗಾಭಟ್ಟ ಪೂಜಾರರು ರಚಿಸಿದ ಶ್ರೀಗುರುಚರಿತ್ರೆಯ ಪದ್ಯರೂಪ

Video: 

Lyrics :

ಸರಸ್ವತಿ ಗಂಗಾಧರ ಗುರುಭಕ್ತನಿಗೊಲಿದು ಬಂದನಾ ಶ್ರೀದತ್ತ

ಪರಿಪರಿ ತಾಪವ ಕೇಶವ ಕಳೆಯುತ ನಿಜ ಸುಖವಿತ್ತನು ಶ್ರೀದತ್ತ


ಕಷ್ಟದಿಂದ ಕಂಗೆಡುವ ಬಾಲಕನ ಕಂಡ ಸಿದ್ಧಮುನಿ ಶ್ರೀದತ್ತ

ದುಷ್ಟ ಭಾವನೆಯ ಬಿಟ್ಟು ಭಜಿಸಿದರೆ ಕೊಟ್ಟು ಕಾಯುವನು ಶ್ರೀದತ್ತ


ನಿಂತು ನುಡಿವ ಯೋಗೀಂದ್ರನಂಘ್ರಯನು ಪಿಡಿದು ಕೇಳಿದ ಶ್ರೀದತ್ತ

ಇಂತು ಕರುಣೆಯದು ಕೊನೆಗೆ ಬಂದಿತೇ ಪಾಲಿಸು ಪಾಲಿಸು ಶ್ರೀದತ್ತ


ಆಲಿಸು ಕುವರನೆ ಶ್ರೀ ಗುರುಚರಿತೆಯ ಭವತಾರಕನವ ಶ್ರೀದತ್ತ

ತೇಲುವ ಎಲ್ಲವ ಹಸಿದವನು ಹಿಂಗಿಸಿ ಹರುಷದಿ ಕಾಯುವ ಶ್ರೀದತ್ತ


ಇವನೇ ದತ್ತನು ಅನಸೂಯಾತ್ಮಜ ವಿಶ್ವನಿಯಾಮಕ ಶ್ರೀದತ್ತ

ಭವತಿಯ ನೆವದಲಿ ಎಪನ ಮಡದಿಗೆ ಸುತನಾದನು ತಾ ಶ್ರೀದತ್ತ


ಶ್ರೀಪಾದ ಶ್ರೀವಲ್ಲಭ ನಾಮದಿ ಕುಲ ಉದ್ಧರಿಸಿದ ಶ್ರೀದತ್ತ

ಕಾಪಿಡೆ ನಡೆದನು ಭಾರತ ಜನವನು ಯಾತ್ರೆಯ ನೆವದಿಂ ಶ್ರೀದತ್ತ


ತೀರ್ಥಕ್ಷೇತ್ರಗಳ ಸುತ್ತಿ ಪತಿತರನು ಪಾವನಗೊಳಿಸಿದ ಶ್ರೀದತ್ತ

ಸಾರ್ಥವಾದ ಗೋಕರ್ಣವ ನೋಡುತ ಕುರವದಿ ನಿಂತನು ಶ್ರೀದತ್ತ


ಮಂದಮತಿ ಅಂಬಾಕುಮಾರನಿಗೆ ಜ್ಞಾನದಾತನು ಶ್ರೀದತ್ತ

ಮಂದವಾಸರದ ಪ್ರದೋಷ ಪೂಜೆಯ ಮಹಿಮೆಯ ಹೇಳಿದ ಶ್ರೀದತ್ತ


ಅಗಸಗೆ ಮುಂದಣ ಜನುಮದಿ ರಾಜ್ಯದ ಭೋಗವನಿತ್ತನು ಶ್ರೀದತ್ತ

ಅಗಲದಂತಿರಲು ವಲ್ಲಭೇಶನ ಸಂಕಟ ಕಳೆದನು ಶ್ರೀ ದತ್ತ


ವಚನದಂತೆ ಅಂಬಾ ಮಾಧವರಿಗೆ ಬಾಲಕನಾದನು ಶ್ರೀದತ್ತ

ಉಚಿತ ಸಮಯ ಬರೆ ನಾಲ್ಕೂ ವೇದದ ಸಾರವ ಹೇಳಿದ ಶ್ರೀದತ್ತ


ಅವಳೀತನಯರ ತಾಯಿಗೆ ಕರುಣಿಸಿ ಕಾಶಿಗೆ ಬಂದನು ಶ್ರೀದತ್ತ

ನವ ಸಂವತ್ಸರವಿರೆ ಸನ್ಯಾಸವ ಸ್ವೀಕರಿಸಿದನು ಶ್ರೀದತ್ತ



ಮೂವತ್ತಬುಧವ ದಾಟಿಬಂದು ತಾಯ್ತಂದೆಯ ನೋಡಿದ ಶ್ರೀದತ್ತ |

ಆವುದನೆಲ್ಲವ ನೀಡಿ ಹರಸುತ ಪಯಣವ ಬೆಳಸಿದ ಶ್ರೀದತ್ತ


ಉದರ ಶೂಲೆಯ ವಿಪ್ರನ ಜನ್ಮವನುಳಿಸಿ ಕಾಯ್ದನು ಶ್ರೀದತ್ತ

ಮುದದಿ ಪೂಜಿಸುವ ಸತಿಪತಿಯರನು ಕಂಡು ನಲಿದನು ಶ್ರೀದತ್ತ


ಸಾಯಂದೇವನ ಸಾವನು ತಪ್ಪಿಸಿ ಯವನನಂಜಿಸಿದ ಶ್ರೀದತ್ತ

ಧೈಯ ಸಾಧನೆಗೆ ಯಾತ್ರೆಯ ಮಾಡಲು ಶಿಷ್ಯನ ಕಳುಹಿದ ಶ್ರೀದತ್ತ


ಗುಪ್ತವಾಗಿರಲು ಗುರುನಿಂದಕನಿಗೆ ಬೋಧವ ಮಾಡಿದ ಶ್ರೀದತ್ತ

ಸುಪ್ತ ಚೇತನವ ಚಾಲಿಪ ಶಕ್ತಿಯು ಗುರುವಿಗಿದೆಂದನು ಶ್ರೀದತ್ತ


ದೇವಿಯ ಬಳಿಯಲಿ ನಾಲಿಗೆ ಕೊಯ್ದಗೆ ಮತಿಯ ಪಾಲಿಸಿದ ಶ್ರೀದತ್ತ

ಭಾವದಿ ಭಿಕ್ಷೆಯ ನೀಡಿದ ವಿಪಗೆ ಸಂಚಿತ ತೋರಿದ ಶ್ರೀದತ್ತ


ಯೋಗಿನಿಯರ ಸಹವಾಸದಿಲುರುವನು ನರಸಿಂಹ ಸರಸ್ವತಿ ಶ್ರೀದತ್ತ |

ಸಾಗಿ ಶೋಧಿಸಿದ ಅಂಬಿಗರವನಿಗೆ ಗುಪಿತವ ಹೇಳಿದ ಶ್ರೀದತ್ತ


ಹರಕೆಯ ಕುವರನ ಹರಣವ ಬರೆಸಿದ ಔದುಂಬರದಿ ಶ್ರೀದತ್ತ |

ಬರುತ ಅಮರಜಾ ಭೀಮಾಸಂಗಮ ಕ್ಷೇತ್ರದಿ ತಂಗಿದ ಶ್ರೀದತ್ತ


ಬರಡೆಮ್ಮೆಯನು ಕರೆಯಿಸಿ ಜನರಿಗೆ ಕೌತುಕ ತೋರಿದ ಶ್ರೀದತ್ತ

ಹರುಷದಿ ಕರೆಯಲು ಗಾಣಗಾಪರಕೆ ನೆಲೆಸ ಬಂದನಾ ಶ್ರೀದತ್ತ


ದೂರಮಾಡಿದ ಬ್ರಹ್ಮರಾಕ್ಷಸನ ಕುಮನಿಗೆ ನಡೆದನು ಶ್ರೀದತ್ತ

ತೋರಿದ ತ್ರಿವಿಕ್ರಮಭಾರತಿಗೆ ವಿಶ್ವರೂಪವನು ಶ್ರೀದತ್ತ


ವಾದಿಸ ಬಂದಿಹ ಸೊಕ್ಕಿದ ವಿಪರ ಗರ್ವವ ಕಳೆದನು ಶ್ರೀದತ್ತ

ವೇದದಸಾರ ನಿರೂಪಣ ಮಾಡುತ ಅದ್ಭುತ ಹೇಳಿದ ಶ್ರೀದತ್ತ


ತಿಳಿಯದ ವಿಪರು ವಾದವ ಬೆಳೆಸಲು ಹೊಲೆಯನ ಕರೆದನು ಶ್ರೀದತ್ತ

ಬಳಿದು ಭಸ್ಮವ ಕೃಪೆಯನ್ನು ಮಾಡುತ ವಾದಿಸ ಹೇಳಿದ ಶ್ರೀದತ್ತ


ಪಾಪಿಗಳಾಗಲೇ ಅಂಜಿ ನಡುಗಿದರು ಶಾಪವ ಕೊಟ್ಟನು ಶ್ರೀದತ್ತ

ಪಾಪ ಪುಣ್ಯದ ಸಂಚಿತ ಕರ್ಮದ ಫಲವನುಸುರಿದ ಶ್ರೀದತ್ತ


ಭಸ್ಮಮಹಾತ್ಮಯ ತಿಳಿ ಹೇಳಿದನು ವಾಮದೇವನು ಶ್ರೀದತ್ತ

ವಿಸ್ಮಯಗೊಂಡಿಹ ರಾಕ್ಷಸ ಜನುಮಕೆ ಮೋಕ್ಷವನಿತ್ತನು ಶ್ರೀದತ್ತ


ಸತಿ ಸಾವಿತ್ರಿಯ ಪತಿ ಮೃತನಾಗಲು ಅಳುವುದ ಕಂಡನು ಶ್ರೀದತ್ತ!

ಸತಿ ಧರ್ಮದ ಇತಿಹಾಸವ ಹೇಳುತ ಸತಿ ಹೋಗೆಂದನು ಶ್ರೀದತ್ತ


ಹೋಗುವ ಮುನ್ನ ಕ್ಷೇತ್ರಕ್ಕೆ ಬಂದ ಬಾಲೆಯ ಹರಸಿದ ಶ್ರೀದತ್ತ |

ಹೋಗದು ಜೀವ ಎನ್ನಯ ನುಡಿಯಿದು ಮಂಗಳವೆಂದನು ಶ್ರೀದತ್ತ


ಚೇತರಿಸಿತು ಶವ ಅಭಿಷಿತ ಜಲದಿಂ ಪ್ರೋಕ್ಷಣೆ ಮಾಡಲು ಶ್ರೀದತ್ತ

ಆತುರದಿಂ ದಂಪತಿಗಳು ಬಾಗಲು ಆಶೀರ್ವದಿಸಿದ ಶ್ರೀದತ್ತ


ರುದ್ರಾಧ್ಯಾಯದ ರುದ್ರಾಕ್ಷಿಯ ಕಥೆ ಹೇಳಿದನವರಿಗೆ ಶ್ರೀದತ್ತ!

ಭದ್ರೆಸಿಮಂತಿನಿ ಮಾಡಿದ ಚಂದಿರವಾರದ ವ್ರತವನ್ನು ಶ್ರೀದತ್ತ


ಬೆಳಗಿನಿಂದಲಿ ರಾತ್ರಿಯವರೆಗಿನ ವಿಹಿತ ಕರ್ಮವನ್ನು ಶ್ರೀದತ್ತ

ತಿಳಿಯಪಡಿಸಿದ ವಿಪ್ರನ ಮಡದಿಗೆ ಪರಾನ್ನದೋಷವ ಶ್ರೀದತ್ತ


ಮೂವರ ಭೋಜನ ಅಕ್ಷಯವಾಗಿಸಿ ದಾಸಗೊಲಿದನು ಶ್ರೀದತ್ತ

ಸಾವ ಸಮೀಪದ ಗಂಗಾಮಾತೆಗೆ ಮಕ್ಕಳ ಕೊಟ್ಟನು ಶ್ರೀದತ್ತ


ಒಣಮರ ಚಿಗುರಿಸಿ ನರಹರಿ ವಿಪ್ರನ ಕುಷ್ಠವ ಕಳೆದನು ಶ್ರೀದತ್ತ

ಅಣುಕದಿ ಅಂಜಿಕೆ ತೋರುತ ಶಿಷ್ಯನ ಪರೀಕ್ಷೆ ಮಾಡಿದ ಶ್ರೀದತ್ತ


ಕಾಶೀಕ್ಷೇತ್ರದ ಮಹಿಮೆಯ ತೋರಿದ ಸಾಯಂ ದೇವಗೆ ಶ್ರೀದತ್ತ

ತೋಷದಲವನು ಹಾಡುತಲೆಂದನು ಹರಿಹರ ಬ್ರಹ್ಮನು ಶ್ರೀದತ್ತ


ಅನಂತನಾವತ ಮಹಿಮೆಯ ಹೇಳುತ ವ್ರತ ಮಾಡಿಸಿದನು ಶ್ರೀದತ್ತ

ಅನಂತಕೋಟೆಯು ಅನಂತರೂಪನು ಅನಂತ ಮಹಿಮನು ಶ್ರೀದತ್ತ


ನೇಕಾರಗೆ ಶ್ರೀಶೈಲದ ಯಾತ್ರೆಯ ಮಾಡಿಸಿದನು ತಾ ಶ್ರೀದತ್ತ

ಸಾಕಾರದಿ ಶಿವರಾತ್ರಿ ಮಹಾತ್ಮಿಯ ಹೇಳಿದನಾತಗೆ ಶ್ರೀದತ್ತ


ದೇವಿಯ ಭಕ್ತನ ಕುಷ್ಠ ನಿವಾರಿಸಿ ಜ್ಞಾನವ ಕೊಟ್ಟನು ಶ್ರೀದತ್ತ

ಕವಿಯಾದಾ ಕಲೇಶನರ್ಚಕನ ಶಿಷ್ಯನ ಮಾಡಿದ ಶ್ರೀದತ್ತ


ಹಸುಳರೆಲ್ಲರನು ಮೆಚ್ಚಿಸಿ ಧರಿಸಿದ ಎಂಟು ರೂಪವನು ಶ್ರೀದತ್ತ

ಕೃಷಿಕನ ಮೌನಾರ್ಚನೆಗೊಲಿದಿತ್ತನು ನೂರ್ಮಡಿ ಧಾನ್ಯವ ಶ್ರೀದತ್ತ


ಮುರಜನರಿಂ ಸಹ ಸಕಲ ತೀರ್ಥಗಳ ಯಾತ್ರೆಯ ಮಾಡಿದ ಶ್ರೀದತ್ತ

ಪೂರ್ವಾಶ್ರಮದ ಭಗಿನಿಯ ಪಾಪಕ್ಷಾಲನೆ ಮಾಡಿದ ಶ್ರೀದತ್ತ


ಹರುಷದಿ ಹೇಳಿದ ಗುರುಗೀತೆಯನು ನಾಮಧಾರಕಗೆ ಶ್ರೀದತ್ತ

* ನೆರೆನಂಬುವರನು ಪರಿಪಾಲಿಸುವುದು ನಿಶ್ಚಿತವೆಂದನು ಶ್ರೀದತ್ತ


ಯಾಕೋ ರಜಕಾ ಎನ್ನುತ ಯವನರ ರಾಜನ ಕರೆದನು ಶ್ರೀದತ್ತ

ಕಾಕುಗೊಂಡಿಹ ರಾಜನ ಮಂಡಿಯ ರೋಗವ ಕಳೆದನು ಶ್ರೀದತ್ತ


ಯವನರ ಕಾಟಕೆ ಕದಳೀವನಕೆ ಹೋಗುವೆನೆಂದನು ಶ್ರೀದತ್ತ

ಅವಸರದಿಂ ಬಲು ಶೋಕಿಸಬೇಡಿರಿ ಇಲ್ಲಿಹನೆಂದನು ಶ್ರೀದತ್ತ


ಹಾಡಿರಿ ಹಾಡಿರಿ ಮತ್ತು ಆರತಿ ಮಾಡಿರಿ ಎಂದನು ಶ್ರೀದತ್ತ

ಬೇಡಿದ ಕೊಡುವೆನು ಭಾವುಕ ಜನರಿಗೆ ಸತ್ಯವು ಎಂದನು ಶ್ರೀದತ್ತ


ಅತಿ ಸಂಕ್ಷೇಪದ ಈ ಗುರು ಚರಿತೆಯ ದಿನವೂ ಹಾಡುವ ಕೇಳ್ವರಿಗೆ

* ಅತಿ ಆನಂದವು ಮೇಣ್ ಸುಖ ಸಂಪದ ಪಾಲಿಸುವನು ತಾ ಶ್ರೀದತ್ತ


ಮಂದಮತಿ ನಾ ತೊದಲ್ನುಡಿಯಿಂದಲಿ ಹಾಡಿದೆನಿದನು ಶ್ರೀದತ್ತ

ವಂದಿಸುತಲಿ ನಾ ಅರ್ಪಣ ಮಾಡುವೆ ನಿನ್ನಡಿಗಳಿಗೆ ಶ್ರೀದತ್ತ


ಮಂಗಳ ಮಂಗಳ ನಿತ್ಯಸುಮಂಗಳ ಮಂಗಳಮಯನು ಶ್ರೀದತ್ತ

ಗಂಗೆ ಮಾಳಾಂಬಿಕೆಕಾಂತಸ್ವರೂಪನು ಸಚ್ಚಿದಾನಂದಮಯ ಶ್ರೀದತ್ತ


| ಸಿದ್ಧಾಂತ ಅವಧೂತ ಚಿಂತನ ಶ್ರೀ ಗುರುದೇವದತ್ತ |

No comments:

ads

ads 728x90 B
Powered by Blogger.